10. ಫೆಬ್ರವರಿ. 2018
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮೊದಲನೇ ಸುತ್ತಿನ ಸಂದರ್ಶನ ಪ್ರಕ್ರಿಯೆಯ ಕೆಲವು ಫೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಸಂಪೂರ್ಣ ಪಾರದರ್ಶಕ ಆಡಳಿತವನ್ನು ತಂದು ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಪ್ರಜಾಕೀಯದ ಮೂಲಕ ಕರ್ನಾಟಕದ ಮೂಲೆ ಮೂಲೆಮೂಲೆಗಳಿಗೂ ಜನ ಮನ ತಲುಪಲು ಕೆ.ಪಿ.ಜೆ.ಪಿ ಪಕ್ಷ ಕಾರ್ಯ ನಿರ್ವಹಿಸುತ್ತಿದೆ.
2018 ನೇ ಸಾಲಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವು ಪ್ರಜಾಕೀಯ ಸಿದ್ದಾಂತದ ಮೂಲಕ ಸ್ಪರ್ಧಿಸುತ್ತಿದೆ.
ಈಗಾಗಲೇ ಕೆ.ಪಿ.ಜೆ.ಪಿ ಪಕ್ಷದ ವತಿಯಿಂದ ಸುಮಾರು 120 ಸಂಭಾವ್ಯ ಅಭ್ಯರ್ಥಿಗಳಿಗೆ ಮೊದಲನೇ ಸುತ್ತಿನ ಸಂದರ್ಶನ ಪ್ರಕ್ರಿಯೆಯು ಪೂರ್ಣಗೊಂಡಿದ್ದು ಎರಡನೇ ಸುತ್ತಿನ ಸಂದರ್ಶನವನ್ನು ಸ್ವತಃ ಉಪೇಂದ್ರರವರೇ ಖುದ್ದಾಗಿ ಮುತುವರ್ಜಿ ವಹಿಸಿ ನಡೆಸುತಿದ್ದಾರೆ.
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಮೊದಲನೇ ಸುತ್ತಿನ ಸಂದರ್ಶನ ಪ್ರಕ್ರಿಯೆಯ ಕೆಲವು ಫೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

























No comments:
Post a Comment