Tuesday, February 20, 2018

ರಿಯಲ್ ಸ್ಟಾರ್ ಉಪೇಂದ್ರರವರಿಂದ ಎಮ್.ಎಲ್.ಎ ಅಭ್ಯರ್ಥಿಗಳಿಗೆ ಪಾರದರ್ಶಕ ಸಂದರ್ಶನ ಪ್ರಕ್ರಿಯೆ - ಪ್ರಸನ್ನ ಕೃಷ್ಣಮೂರ್ತಿ

ರಿಯಲ್ ಸ್ಟಾರ್ ಉಪೇಂದ್ರರವರಿಂದ ಎಮ್.ಎಲ್.ಎ ಅಭ್ಯರ್ಥಿಗಳಿಗೆ ಪಾರದರ್ಶಕ ಸಂದರ್ಶನ ಪ್ರಕ್ರಿಯೆ- ಪ್ರಸನ್ನ ಕೃಷ್ಣಮೂರ್ತಿ

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಅರ್ಹ ಸಂಭಾವ್ಯ ಎಮ್.ಎಲ್.ಎ  ಅಭ್ಯರ್ಥಿಗಳ ಆಯ್ಕೆಗಾಗಿ ಎರಡನೇ ಸುತ್ತಿನ ಮುಂದುವರಿದ ಸಂದರ್ಶನ ಪ್ರಕ್ರಿಯೆಯು ಭರದಿಂದ ನಡೆಯುತಿದ್ದು ಸುಮಾರು 120 ಸಂಭಾವ್ಯ ಎಮ್.ಎಲ್.ಎ ಅಭ್ಯರ್ಥಿಗಳು ಸಂದರ್ಶನ ಪ್ರಕ್ರಿಯೆಗೆ ಒಳಪಟ್ಟಿದ್ದು ಅದರಲ್ಲಿ ಕೆಲವು ಸಂಭಾವ್ಯ ಅಭ್ಯರ್ಥಿಗಳ ಫೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ಈಗ ಸಂದರ್ಶನ ಪ್ರಕ್ರಿಯೆಗೆ ಒಳಪಟ್ಟಿರುವ ಅಭ್ಯರ್ಥಿಗಳೆಲ್ಲರೂ ಸಂಭಾವ್ಯ ಅಭ್ಯರ್ಥಿಗಳಾಗಿದ್ದು ಅಧಿಕೃತವಾಗಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ನಾನೇ (ಉಪೇಂದ್ರರವರೇ) ಖುದ್ದಾಗಿ ದೃಶ್ಯಮಾಧ್ಯಮಗಳಲ್ಲಿಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸುತ್ತೇನೆ ಎಂದು ಹೇಳಿದರು.

ಅರ್ಹ ಸಂಭಾವ್ಯ ಎಮ್.ಎಲ್.ಎ ಅಭ್ಯರ್ಥಿಗಳ ಆಯ್ಕೆ ಹಾಗೂ ಸಂದರ್ಶನ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ವೀಡಿಯೊ ರೆಕಾರ್ಡಿಂಗ್ ಮಾಡಲಾಗುತಿದ್ದು ಈಗಾಗಲೇ ಸಂದರ್ಶನ ಪ್ರಕ್ರಿಯೆಯ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪೋಸ್ಟ್ ಸಹಾ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಸುರಕ್ಷತೆಯ ದೃಷ್ಟಿಯಿಂದಾಗಿ ಎಲ್ಲಾ ವಿಡಿಯೋಗಳನ್ನು ಅಧಿಕೃತ ಅಭ್ಯರ್ಥಿಗಳ ಘೋಷಣೆಯ ನಂತರ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣಗಳು, ವೆಬ್ಸೈಟ್ ಇನ್ನೂ ಮುಂತಾದ ಮಾದ್ಯಮಗಳಲ್ಲಿ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಉಪೇಂದ್ರರವರು ಈ ಸಂದರ್ಭದಲ್ಲಿ ಹೇಳಿದರು.

ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆಗಳ ಬಗ್ಗೆ ಕೆ.ಪಿ.ಜೆ.ಪಿ ರಾಷ್ಟ್ರಾದ್ಯಕ್ಷರಾದ ಉಪೇಂದ್ರರವರ ಬಳಿ ಮಾಹಿತಿ ಕೇಳಿದಾಗ "ಕರ್ನಾಟಕದ ಮೂಲೆ ಮೂಲೆಗಳಿಂದ ಸಾವಿರಾರು ಎಮ್.ಎಲ್.ಎ ಆಕಾಂಕ್ಷೆಯನ್ನು ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳು ಬಂದಿದ್ದು ಅವೆಲ್ಲವುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಈಗಾಗಲೇ ಸುಮಾರು 120 ಸಂಭಾವ್ಯ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯುತಿದ್ದು ಅಧಿಕೃತ ಎಮ್.ಎಲ್.ಎ ಅಭ್ಯರ್ಥಿಗಳ (ಕಾರ್ಮಿಕರ) ಪಟ್ಟಿಯನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸುತ್ತೇನೆ ಎಂದರು"

ಸುಮಾರು 50 ಸಂಭಾವ್ಯ ಅಭ್ಯರ್ಥಿಗಳ ಫೋಟೋಗಳನ್ನು ಉಪೇಂದ್ರರವರು ತಮ್ಮ ಅಧಿಕೃತ ಫೇಸ್ ಬುಕ್ ಪೇಜ್‌ನಲ್ಲಿ  ಶುಕ್ರವಾರ (ಫೆಬ್ರವರಿ 09 2018) ರಂದು ಪೋಸ್ಟ್ ಮಾಡಿದ್ದರು. ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾತನಾಡುತ್ತಾ "ಇದುವರೆಗೂ ಕರ್ನಾಟಕದ ಯಾವುದೇ ಕ್ಷೇತ್ರಗಳಿಗೆ  ಅಭ್ಯರ್ಥಿಗಳನ್ನು ಅಧಿಕೃತವಾಗಿ ಪ್ರಕಟಿಸಿಲ್ಲಾ" ಎಂದು ಉಪೇಂದ್ರರವರು ಹೇಳಿಕೆ ನೀಡಿದರು.
































































































































































 ನಿಮ್ಮ ಸಲಹೆ ಸೂಚನೆಗಳನ್ನು ನಮಗೆ ತಿಳಿಸಿ. ನಮ್ಮನ್ನು ಈ ಕೆಳಗಿನ ಫೇಸ್ ಬುಕ್, ಟ್ವಿಟರ್,  ವೆಬ್ಸೈಟ್ & ದೂರವಾಣಿಗಳಲ್ಲಿ ಸಂಪರ್ಕಿಸಬಹುದು....

https://youtu.be/nTiO6Gziqywhttps://youtu.be/vrFvcKY53ig

https://www.facebook.com/nimmauppi

https://twitter.com/nimmaupendra



https://play.google.com/store/apps/details?id=com.app.prajaakeeya
https://www.facebook.com/nimmaupendra/
ideaskpjpuppi@gmail.com
+91 98453 96204 | +91 98453 96804

1 comment:

  1. Hello sir,

    I'm Gagan from kushalnagar coorg district. I mailed my application form and problems with solutions mini report for
    #208-MADIKERI assembly Constituency.

    My number 9035476889
    #no reply 😔

    Thank you

    ReplyDelete