Wednesday, January 31, 2018

ಪ್ರಜಾಕೀಯಕ್ಕೆ ಬೆಂಬಲ ಸೂಚಿಸಿದ ಅಣ್ಣಾ ಹಜಾರೆ.- ಪ್ರಸನ್ನ ಕೃಷ್ಣಮೂರ್ತಿ


ಪ್ರಜಾಕೀಯಕ್ಕೆ ಬೆಂಬಲ ಸೂಚಿಸಿದ ಅಣ್ಣಾ ಹಜಾರೆ.


ಬೆಂಗಳೂರು. ಜನವರಿ 31.

ಭ್ರಷ್ಟಾಚಾರಕ್ಕೆ ವಿರುದ್ದವಾಗಿ ದೇಶವ್ಯಾಪಿ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆಯವರನ್ನು ಇಂದು ಉಪೇಂದ್ರರವರು ಭೇಟಿಯಾದರು. ಪ್ರಜಾಕೀಯದ ಪರಿಕಲ್ಪನೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಅಣ್ಣಾ ಹಜಾರೆಯವರು ಉಪೇಂದ್ರರವರೊಂದಿಗೆ ಉತ್ತಮ ಮಾರ್ಗದರ್ಶನಕ್ಕಾಗಿ ಹಲವು ಅಂಶಗಳನ್ನು ಹಂಚಿಕೊಂಡರು
ಪ್ರಸಕ್ತ ಸಮಾಜದ ಬಗ್ಗೆ ಚರ್ಚೆ ನಡೆಸುತ್ತಾ ಮುಂಬರುವ ದಿನಗಳಲ್ಲಿ ಇತರ ರಾಜಕೀಯ ಪಕ್ಷಗಳಂತೆ ವರ್ತಿಸದೆ ಪ್ರಜಾಕೀಯದ ಸಿದ್ದಾಂತದಡಿಯಲ್ಲಿ ಪ್ರಜಾಪ್ರಭುತ್ವದ ಹಾದಿಯಲ್ಲಿ ಪ್ರಜೆಗಳ ಸರ್ವತ್ತೊಮುಖ ಅಭಿವೃದ್ದಿಗಾಗಿ ಶ್ರಮಿಸುವಂತೆ ಹೇಳಿದರು.
ವ್ಯಕ್ತಿ, ಭಾಷೆ, ಜಾತಿ, ಧರ್ಮಗಳ ಆಧಾರವಿಲ್ಲದೇ ಕೇವಲವಿಚಾರಗಳ ಆಧಾರದ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಉಪೇಂದ್ರರವರ ನಿಲುವನ್ನು ಅಣ್ಣಾ ಹಜಾರೆಯವರು ಶ್ಲಾಘಿಸಿದರು.

ತಾವು 80ನೇ ವಯಸ್ಸಿನಲ್ಲಿ ದೇಶದ ಅಭಿವೃಧ್ಧಿಗಾಗಿ ಚೈತನ್ಯದಿಂದ ಶ್ರಮಿಸುತಿದ್ದೇನೆ ಅಂತೆಯೇ ಯುವಜನತೆಯು ಹುಮ್ಮಸ್ಸಿನಿಂದ ಸುಂದರ ಸಮಾಜದ ವ್ಯವಸ್ಥೆಯನ್ನು ನಿರ್ಮಿಸಲು ಪಣ ತೊಡಬೇಕು ಎಂದು ಕರೆ ನೀಡಿದರು.

ಸಂವಿಧಾನದಲ್ಲಿ ಪಕ್ಷ ಆಧಾರಿತ ಚುನಾವಣೆಗೆ ಅವಕಾಶವಿಲ್ಲ, ವ್ಯಕ್ತಿಗಳ ಯೋಗ್ಯತೆಯ ಆಧಾರದ ಮೇಲೆ ಚುನಾವಣೆಗಳು ನಡೆಯಬೇಕು. ಸಜ್ಜನ ಹಾಗೂ ಉತ್ತಮ ಚಾರಿತ್ರ್ಯ  ಹೊಂದಿರುವ ಜನ ಪ್ರತಿನಿಧಿಗಳು ಆರಿಸಿ ಬಂದಾಗಲೇ ಪ್ರಜಾಪ್ರಭುತ್ವದ ಉದ್ದೇಶಗಳು ಈಡೇರುವುದು ಎಂದರು.

ಕೊನೆಯಲ್ಲಿ ಪ್ರಜಾಕೀಯ ಸಿದ್ದಾಂತವನ್ನು ಇಟ್ಟುಕೊಂಡು ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಸ್ವಯಂಪ್ರೇರಿತವಾಗಿ ಅಣ್ಣಾ ಹಜಾರೆಯಾವರೇ ಖುದ್ದಾಗಿ ಮಾರ್ಗದರ್ಶನ ನೀಡುವುದಾಗಿ ಹೇಳಿಕೆ ನೀಡಿದರು.













8 comments:

  1. ಧನ್ಯವಾದಗಳು ಸರ್

    ReplyDelete
  2. ಪ್ರಸನ್ನ ಅವರೇ, ಈ ವಿಷಯವನ್ನು ಹಂಚಿಕೊಂಡಿದ್ದಕ್ಕೆ ನಿಮಗೆ ಧನ್ಯವಾದಗಳು

    ReplyDelete
  3. Anna Hajaare yavaru KPJP he Bembala kottare mutthama.....

    ReplyDelete