Friday, February 2, 2018

ನಡೆದಾಡುವ ದೇವರ ಸಾನಿಧ್ಯದಲ್ಲಿ ಉಪ್ಪಿ!!! - ಪ್ರಸನ್ನ ಕೃಷ್ಣಮೂರ್ತಿ





ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕಯೋಗಿ ಎಲ್ಲರೂ ನನ್ನವರೆನ್ನುವ ಭಾವದ ವಿಶ್ವಮಾನವ ಸಂದೇಶ ಸಾರಿದ ಸಿದ್ಧಗಂಗಾ ಮಠಾಧೀಶರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಇಂದು ಚಲನಚಿತ್ರ ನಟ ಹಾಗೂ ಪ್ರಜಾಕಾರಣಿ ಉಪೇಂದ್ರರವರು ಭೇಟಿಯಾಗಿ ಸ್ವಾಮೀಜಿಗಳ ಆರೋಗ್ಯದ ಬಗ್ಗೆ ವಿಚಾರಿಸಿದರು.ಸುಮಾರು ಒಂದು ಗಂಟೆಗಳ ಕಾಲ ಮಠದಲ್ಲಿಯೇ ಇದ್ದ ಉಪೇಂದ್ರರವರಿಗೆ ಮಠಾಧೀಶ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಯವರು ಆಶಿರ್ವದಿಸಿ ಹರಸಿದರು. ಉಪೇಂದ್ರರವರು ಶ್ರೀಗಳಿಗೆ ಭಾವಪೂರ್ವಕವಾಗಿ ನಮನ ಸಲ್ಲಿಸಿದರು. ನಂತರದಲ್ಲಿ ಮಠದ ಒಳ-ಹೊರ ಪರಿಸರವನ್ನು ಅವಲೋಕಿಸಿದ ಉಪೇಂದ್ರರವರು ತಮ್ಮ ಅಭಿಮಾನಿಗಳ ಹಾಗೂ ಮಕ್ಕಳ ಗುಂಪಿನೊಂದಿಗೆ ಉಪೇಂದ್ರರವರು ಕೆಲ ಹೊತ್ತು ಸಮಯ ಕಳೆದರು.ಉಪೇಂದ್ರರವರು ಶ್ರೀಗಳ ಯೋಗಕ್ಷೇಮ ವಿಚಾರಿಸುವ ಸಲುವಾಗಿ ಸಾಮಾನ್ಯರಂತೆ ಅನಿರೀಕ್ಷಿತವಾಗಿ ವೈಯಕ್ತಿಕ ಭೇಟಿ ನೀಡಿದ್ದು ಅವರ ಸರಳತೆಗೆ ಸಾಕ್ಷಿಯಾಗಿತ್ತು. 
ಸರಳ, ಸಜ್ಜನಿಕೆ, ಮಮತೆ, ನಿಸ್ವಾರ್ಥಗಳ ಸಾಕಾರಮೂರ್ತಿ. ನೂರಹನ್ನೊಂದು ಸಂವತ್ಸರ, ಶತಮಾನದ ಪಲ್ಲಟಗಳಿಗೆ ಸಾಕ್ಷಿಯಾಗಿರುವ ಇಂತಹ ಅಪರೂಪದ ಕಾಯಕ ಯೋಗಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇನ್ನೂ ನೂರ್ಕಾಲ ಬಾಳಲಿ, ಜನರು ಅವರ ಬದುಕನ್ನು ಅನುಸರಿಸಿ, ಮತ್ತಷ್ಟು ಆರೋಗ್ಯವಂತ ಸಮಾಜ ನಿರ್ಮಿಸುವಂತಾಗಲಿ ಎಂದು ಉಪೇಂದ್ರರವರು ಈ ಸಂದರ್ಭದಲ್ಲಿ ಹೇಳಿದರು.- ಚಿತ್ರ ಲೇಖನ: ಪ್ರಸನ್ನ ಕೃಷ್ಣಮೂರ್ತಿ

1 comment:

  1. ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ದೇವರೇ ಪ್ರತ್ಯೇಕವಾಗಿ ಬಂದು ಹರಿಸಿದಷ್ಟೇ ಅಮೂಲ್ಯ
    ವಾದುದು.

    ReplyDelete