Saturday, January 27, 2018

ಪ್ರಜಾಪ್ರಭುತ್ವಕ್ಕಾಗಿ ಮತ - ಪ್ರಸನ್ನ ಕೃಷ್ಣಮೂರ್ತಿ

ದಂಪತಿಗಳ ಹೆಸರಿಗೆ ಒಂದು ಲಕೋಟೆ ಅಂಚೆ ಮೂಲಕ ಬಂತ್ತು. ಲಕೋಟೆ ಒಡೆದು ನೋಡಿದಾಗ ಪಾತ್ರದಲ್ಲಿ ನಿಮಗೆ ನಾಳೆ ಬಿಡುಗಡೆಯಾಗುವ ಖ್ಯಾತ.ತಾರೆಯರ ಚಿತ್ರವನ್ನು ಮಲ್ಚಿಪ್ಲೇಕ್ಸನಲಿ ವೀಕ್ಷಿಸಲು ಎರಡು ಗೋಲ್ಡ ಟೀಕೆಟ್ ಉಚಿತವಾಗಿ ಕೊಟ್ಟಿದೆ, ನಾವು ಯಾರು ಎಂದು ಊಹೆ ಮಾಡಿ ಹೇಳಿ ಎಂದಿತ್ತು.

ದಂಪತಿಗಳಿಗೆ ಎಷ್ಟು ಯೋಚನೆ ಮಾಡಿದರು ಯಾರು ಎಂದು ತಿಳಿಯಲಿಲ್ಲಾ,  ಆದರೆ ಉಚಿತವಾಗಿ ಬಂದದನ್ನು ವ್ಯರ್ಥ ಮಾಡಬಾರದೆಂದು ಸಿನೆಮಾ ನೋಡಲು ಹೋದರು.


ಸಿನೆಮಾ ನೋಡಿ ಖುಷಿಯಾಗಿ ಬಂದ ದಂಪತಿಗಳಿಗೆ ಆಘಾತವಾಯಿತು, ಕಾರಣ ಅವರ ಮನೆ ಬೀಗ ಮುರಿದು ಹಣ, ಒಡವೆ, ವಸ್ತುಗಳನ್ನೆಲಾ ಕಳ್ಳರು ದೋಚಿಕೊಂಡು ಹೋಗಿದ್ದರು. ಮನೆಯಲ್ಲಿ ಮತ್ತೂಂದು ಪತ್ರ  ಇಟ್ಟುಹೋಗಿದರು-  ಈಗ ನಿಮಗೆ ಉಚಿತವಾಗಿ ಟಿಕೇಟುಕೊಟ್ಟವರು ಯಾರೆಂದು ಗೊತ್ತಾಗಿ ಬೈಯುತೀರಿ ಎಂದು ಬರೆದಿತ್ತು. 


ದಂಪತಿಗಳಬ್ಬರು ಅಯ್ಯೋ ಪಾಪಿ ಮುಂಡೆ ಮಕ್ಕಳೆ ನಮಗೆ ಮೊಸ ಮಾಡಿ ನಮ್ಮನು ನಾಶ ಮಾಡಿರುವಿರಿ  ನೀವು ನಾಶ ವಾಗಿ ಎಂದು ಶಾಪ ಹಾಕುತ್ತಾ ಅಳುತ್ತಾ ಕೂತರು.

ನೀತಿಪಾಠ:-ರಾಜಕೀಯ ಪಕ್ಷದವರು ನಿಮ್ಮ ಓಟಿಗಾಗಿ ಯಾವುದನ್ನೆ (ಸೀರೆ, ಮದ್ಯ, ಹಣ, ಆಮಿಷ)  ಕೊಟ್ಟರೂ ಅದಕ್ಕೆ ನೂರು ಪಟ್ಟು ನಿಮ್ಮಿಂದ ದೋಚುತ್ತಾರೆ. ಉಚಿತವಾಗಿ ಪ್ರಪಂಚದಲ್ಲಿ ಏನು ಸಿಗುವುದಿಲ್ಲ.ಗಾಳಿಯೊಂದು ಬಿಟ್ಟು ಅದಕ್ಕೂ ಸಹ ಹೆಚ್ಚು ಮರಬೆಳಸಬೇಕು.  ಇನ್ನು ಮುಂದೆ ಯಾರು ಏನೇ ಉಚಿತವಾಗಿ ಕೊಡಲು ಬಂದರೆ ಯೋಚಿಸಿ...


ಈ ವರ್ಷದ ಚುನಾವಣೆಯಲ್ಲಿ ಪ್ರಜ್ಞಾವಂತರಾಗಿ, ಸ್ವಂತಿಕೆಯಿಂದ, ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಯಾವುದೇ ಆಮಿಷವಿಲ್ಲದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ


No comments:

Post a Comment